ಕಾರವಾರ 29: ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೇಣಿಯಲ್ಲಿ ಜೆ. ಎಸ್. ಡಬ್ಲ್ಯೂ. ನಿಂದ ದೊಡ್ಡ ಬಂದರು ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದ್ದು, ಶುಕ್ರವಾರ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಬಳಿ ಮೂರು ತಾಸು ಪತ್ರಿಭಟನೆ ಮಾಡಿದರು.
ಕೇಣಿಯಲ್ಲಿ ಬಂದರು ನಿರ್ಮಾ ಮಾಡುವುದರಿಂದ ಸುತ್ತ ಮುತ್ತಲಿನ ಗಾಬೀತ ಕೇಣಿ, ಕೇಣಿ, ಹರಿಕಂತ್ರವಾಡ, ದೇಶನ್ಯಭಾಗ, ಗೇರಕೊಪ್ಪಾ, ರಾಮನಗರ, ಹರಿಕಂತ್ರವಾಡ, ಕೋಮಾರಪಂಥವಾಡ, ಬಡಗೇರಿ ಹಾಲಕ್ಕಿ, ಭಾವಿಕೇರಿ, ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಪತ್ರಿಭಟನಾನಿರತರು ಹೇಳಿದರು.ಕೇಣಿಯಲ್ಲಿ ಅತೀದೊಡ್ಡ ಗ್ರೀನ್ ಪಿಲ್ಡ್ ಪೋರ್ಟ ನಿರ್ಮಾಣವಾಗುತ್ತದೆ ಎಂದು ಸುದ್ದಿಯಾಗಿತ್ತು. ಈಗ ನಿರ್ಮಾಣಕ್ಕೆ ಮುಂಚೆ ಸರ್ವೆಕಾರ್ಯ ನಡೆಯುತ್ತಿದೆ.
ಬಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಮುದ್ರದಲ್ಲಿ 5 ಕಿ.ಮೀ ನಾಟಿಕಲ್ ಮೈಲ್ ದೂರದಲ್ಲಿ ಸರ್ವೆ ಕಾರ್ಯವನ್ನು ಜೆಎಸ್ ಡಬ್ಲು ನವರು ನಡೆಸುತ್ತಿದ್ದಾರೆ. ಬಂದರು ನಿರ್ಮಾಣದಿಂದ ಸಮುದ್ರದ ಮೀನುಗಾರಿಕೆ ಮಾಡುವ ಯಾಂತ್ರಿಕ ದೋಣಿ, ಪಾತಿಗಳಿಗೆ ಮತ್ತು ಬೋಟುಗಳಿಗೆ ಮೀನುಗಾರಿಕಾ ಮಾಡಲು ತೊಂದರೆದಾಯಗಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಸರ್ವೆ ಪಾಯಿಂಟ್‌ನಲ್ಲಿ ಹಾಕಿರುವ ಕಲ್ಲುಗಳು ಬಲೆಗೆ ತಾಗಿ, ಬಲೆಗಳು ಹರಿದು ನಾಶವಾಗುತ್ತದೆ. ಮತ್ತು ಇದರಿಂದ ಮೀನುಗಾರಿಕೆಗೆ ಕಷ್ಟವಾಗಲಿದೆ . ಮೀನು ಸಿಗದೇ ಡೀಸಲ್ ಹಾಗೂ ಪೆಟ್ರೋಲ್ ಇಂಜಿನಗಳಿಗೆ ಹಾಕಿದ ವೆಚ್ಚ ಸಹ ಭರಿಸದಷ್ಟು ಮೀನು ಸೀಗದೆ ಹಾನಿಯಾಗಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.ರಫ್ತು ವಹಿವಾಟು ಕೇಂದ್ರವಾಗುವುದರಿಂದ ಇಲ್ಲಿಯ ಗ್ರಾಮದ ಜನರಿಗೆ ವಾತಾವರಣ ಕಲುಷಿತವಾಗಲಿದೆ.
ಹಾಗಾಗಿ ಬಂದರು ನಿರ್ಮಾಣ ಬೇಡ ಎಂದುಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಮನವಿ ನೀಡಲಾಯಿತು.ಪ್ರತಿಭಟನೆಯಲ್ಲಿ ಕೇಣಿ ಭಾಗದ ಮೀನುಗಾರ ಮುಖಂಡರು ಭಾವಿಕೇರಿ ಗ್ರಾಮದ ಮುಖಂಡರು, ಗ್ರಾಮ ಪಂಚಾಯತ ಮಾಜಿ ಸದಸ್ಯ ಶ್ರೀಕಾಂತ ಡಿ. ದುರ್ಗೇಕರ ಹಾಗೂ ಮಾಜಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಚಂದ್ರಕಾಂತ ಓಮು ಹರಿಕಾಂತ, ಸೂರಜ್ ಉಮಾ ಹರಿಕಂತ್ರ ಗ್ರಾಮ ಪಂಚಾಯತ ಮಾಜಿ ಸದಸ್ಯರು, ಸರಿತಾ ಎಸ್ ಬಲೆಗಾರ ಗ್ರಾ.ಪ ಅಧ್ಯಕ್ಷರು, ಜ್ಞಾನೇಶ್ವರ ವಿಷ್ಣು ಹರಿಕಂತ್ರ ಮುಂತಾದ ಪ್ರಮುಖರು, ಗ್ರಾಮಸ್ಥರು ಇದ್ದರು.