ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಅನ್ಯಾಯ ವಿರುದ್ಧ ಹಿತ ಕಾಪಾಡಲು ಲಿಂಗಾಯತ ರಕ್ಷಣಾ ಸಮಿತಿ ರಚನೆ ಸಲುವಾಗಿ ಸಭೆ
Meeting to form Lingayat Defence Committee to protect student Aditya Mageri against injustice
ಲೋಕದರ್ಶನ ವರದಿ
ಧಾರವಾಡ 24 : ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಪೊಲೀಸರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಮೂರು ಪೊಲೀಸ್ ಸಿಬ್ಬಂದಿ ಇನ್ಸ್ಪೆಕ್ಟರ್ ಅನ್ನು ಸಸ್ಪೆಂಡ್ ಮಾಡಿ ಕೈ ತೊಳೆದುಕೊಂಡಿದ್ದನ್ನು ಖಂಡಿಸಿ ಸಸ್ಪೆಂಡ್ ಮಾಡಿದರೆ ಸಾಲದು ಎಂದು ಅವರ ಮೇಲೆ ಎಫ್ಐಆರ್ ಮಾಡಿ ನಿವೃತ್ತ ಹೈ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಆದರೆ ಇವತ್ತಿನವರೆಗೂ ಯಾವುದೇ ಪ್ರಕ್ರಿಯ ಬರದ ಕಾರಣ ಧಾರವಾಡದ ಲಿಂಗಾಯತ ಭವನದಲ್ಲಿ ಮುಖಂಡಸಭೆಯಲ್ಲಿ ಮರಣ ಹೊಂದಿದ ಆದಿತ್ಯ ಮ್ಯಾಗೇರಿಗೆ ನ್ಯಾಯ ಸಿಗಬೇಕು.
ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು ತಪ್ಪಿಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕೆಂದು ಮುಂದೆ ಯಾವುದೇ ವಿದ್ಯಾರ್ಥಿಗೆ ಇಂತಹ ಘಟನೆ ಆಗಬಾರದೆಂದು ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ ಹಿತ ಕಾಪಾಡಲು ವೀರಶೈವ ಲಿಂಗಾಯತ ರಕ್ಷಣಾ ಸಮಿತಿ ರಚನೆ ಸಲುವಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ದಿನದಲ್ಲಿ ಸೂಕ್ತ ನ್ಯಾಯ ಸಿಗದೇ ಹೋದರೆ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣವನ್ನು ದಾಖಲು ಮಾಡಲು ಚಿಂತಿಸಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾದ ಶಿವಶರಣ ಕಲಬಶೆಟ್ಟರ್ ಕೋಶಾಧ್ಯಕ್ಷರಾದ ಮಡಿವಾಳಪ್ಪ ಸಿರಿಯನ್ನವರ್ ನಿರ್ದೇಶಕರಾದ ವೀರೇಶ್ ಕೆಲಗೇರಿ ಮಂಜುನಾಥ್ ಮೂಗನವರ್ ಮಹಿಳಾ ಮುಖಂಡರಾದ ವಿಜಯಲಕ್ಷ್ಮಿ ಕಲ್ಯಾಣ್ ಶೆಟ್ಟರ್ ಡಾಕ್ಟರ್ ಎಸ್.ಎಲ್ ಬಿರಾದಾರ ಆದಿ ಬಣಜಿಗ ಸಂಘದ ಕಾರ್ಯದರ್ಶಿಯಾದ ನಿರಂಜನ್ ಸುಭಾಷ್ ಕ್ವಾಟಿ ಮುಖಂಡರುಗಳಾದ ವೀರಯ್ಯ ಚಿಕ್ಕಮಠ ಶ್ರೀಶೈಲ್ ಗೌಡ ಕಮತರ ವಿವೇಕಾನಂದ ಗುಡ್ಡದ ಅರುಣ ಅಮರಗೋಳ ಮಹಾಂತೇಶ್ ಕರಿಕಾಯ ರಾಮನಗೌಡ ಕಿತ್ತೂರ ಎಂ. ಆರ್ ಮರ್ತಮ್ಮ ನವರ ಮಂಜುನಾಥ್ ಸಂಕನವರ ನಾಗನಗೌಡ ಪಾಟೀಲ್ ಸಿದ್ದಲಿಂಗಯ್ಯ ಗುಡ್ಡದಮಠ ಮಲ್ಲಿಕಾರ್ಜುನ್ ಮಠಪತಿ ಆದಿತ್ಯ ಮ್ಯಾಗೇರಿ ಕುಟುಂಬಸ್ಥರು ಇನ್ನಿತರ ಉಪಸ್ಥಿತರಿದ್ದರು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 