ಗುರ್ಲಾಪೂರದಲ್ಲಿ ಮಾರುತಿದೇವರ ಓಕಳಿ ಹಾಗು ಬಸವೇಶ್ವರರಥೋತ್ಸವ ಸಂಪನ್ನ

ಗುರ್ಲಾಪೂರದಲ್ಲಿ ಮಾರುತಿದೇವರ ಓಕಳಿ ಹಾಗು ಬಸವೇಶ್ವರರಥೋತ್ಸವ ಸಂಪನ್ನ Maruti Devaru's Okali and Basaveshwara Chariot Festival in Gurlapur

ಲೋಕದರ್ಶನ ವರದಿ 

ಗುರ್ಲಾಪೂರ 27 : ಪ್ರತಿವರ್ಷದಂತೆ ಈ ವರ್ಷವು ಮಾರುತಿದೇವರ ಓಕಳಿ ಹಾಗೂ ಬಸವೇಶ್ವರ ರಥೋತ್ಸವವು ದಿ:21 ರಿಂದ 27 ವರಿಗೆಅದ್ದೂರಿಯಾಗಿ ಸಂಬ್ರಮದಿಂದ ಜರಗಿತು. ಗುರುವಾರ ದಿ.21 ರಂದು ಗ್ರಾಮದ ಮಾರುತಿದೇವರ ಮುಂದೆಇರುವ ಓಕಳಿ ಹೊಂಡಕ್ಕೆ ವಿಷೇಶವಾಗಿ ಪೊಜೆ ಸಲ್ಲಿಸಿ ಓಕಳಿ ಹೊಂಡತಗೆದು ಸಣ್ಣಓಕಳಿ ಮಕ್ಕಳು ಆಟವಾಡಿದರು. ಶುಕ್ರವಾರಂದು ಗ್ರಾಮದ ಲಕ್ಷ್ಮಿದೇವಿಗೆ ವಿಷೇಶ ಪೊಜೆಮಾಡಿ ಉಡಿ ತುಂಬಿ ಮಹಾಮಂಗಳಾರತಿ ಮಾಡಿ ಸಂಜೆ ಗ್ರಾಮದ ಮಕ್ಕಳು  ಓಕಳಿ ಆಟವಾಡಿದರು. ಶನಿವಾರರಂದು ಗ್ರಾಮದ ಮಾರುತಿದೇವರಿಗೆ ವಿಷೇಶವಾಗಿ ಪೂಜೆಮಾಡಿ ಬಸವೇಶವರರಥದಲ್ಲಿ ಗೌಡರ ಮನೆಯಿಂದ ಕಳಸಕ್ಕೆ ಪೋಜೆ ಮಾಡಿ ಬಸವೇಶ್ವರರಥದಲ್ಲಿ ಬಸವೇಶ್ವರ ಮೂರ್ತಿ ಹಾಗು ಕಳಸವನ್ನು ರಥಕ್ಕೆ ಅಲಂಕರಿಸಿದರು, ನಂತರ. ಯುವಕರುಸೇರಿಕಡೆ ಓಕಳಿ ಆಟವಾಡಿದರು,ತದನಂತರ ಮಾರುತಿದೇವರ ಪಲಕ್ಕಿಯೊಂದಿಗೆ ಓಕಳಿ ಹೊಂಡಕ್ಕೆ ಪ್ರದಷಣೆ ಮಾಡಿ ಬಸವೇಶ್ವರರ ಗದ್ದುಗೆಯವರಿಗೆ ಹೋಗಿ ಮಹಾಮಂಗಳಾರತಿ ಮಾಡಿ ಪಲಕ್ಕಿಉತಸ್ಸವ ಮರಳಿ ಮಾರುತಿದೇವಸ್ಥಾನಕ್ಕೆ  ಬರಮಾಡಿಕೊಂಡರು, 

ಸೋಮವಾರ ದಿ.25ರಂದು ಬಸವೇಶ್ವರರ ಗದ್ದುಗೆಗೆ ಮಹಾಅಭಿಷಕಮಾಡಿ ಉತ್ಸವ ಮೋರ್ಥಿಯನ್ನು ಶ್ರಗರಿಸಿದರು. ಸಂಜೆ 5 ಗಂಟೆಗೆ ಬಸವೇಶ್ವರ ದೇವಸ್ಥಾನದಿಂದ ರಥೋತ್ಸವವು ಮಾರುತಿ ದೇವಸ್ಥಾನದವರಿಗೆ ಜರುಗಿ ಮಹಾ ಮಂಗಳಾರುತಿ ಸಲ್ಲಿಸಿ ಮರಳಿ ರಥೋತ್ಸವ ಬಸವೇಶ್ವರಕ್ಕೆ ದೇವಸ್ಥನಕ್ಕೆ  ಬರಮಾಡಿಕೊಂಡರು, ಈ ಸಮಯದಲ್ಲಿ ಸುಮಂಗಲಿಯರ ಆರತಿಯೂಂದಿಗೆ ಸಕಲ ವಾದ್ಯ ಮೇಳ ಕುದರಿಕುಣಿತ ಹಾಗೂ ರೂಪಕಗಳು ಪ್ರದರ್ಶನಜರಗಿತು, ರಾತ್ರಿ ಸಮಾಜಿಕ ನಾಟಕ ಮಾಡಿದರು, 

ಬುದವಾರ ದಿ.27 ರಂದು ಬಸವೇಶ್ವರರಥೋತ್ಸವದ ಮೇಲೆ ಇರುವ ಕಳಸ ಹಾಗೂ ಬಸವೇಶ್ವರಉತ್ಸವ ಮೂರ್ತಿಯನ್ನುಕೆಳಗೆ ತಗೆದುಕೊಂಡು ಪೂಜೆ ಮಾಡಿ ಸಕಲ ವಾದ್ಯವ್ರಂದ ಹಾಗೂ ಸುಮಂಗಲೆಯರು ಆರತಿ ತಗೆದುಕೋಂಡು ಗ್ರಾಮದಗೌಡರ ಮನೆಗೆ ತಂದು ಗ್ರಾಮಸ್ಥರು ಅತಿ ಸಂಬ್ರಮದಿಂದ ಜಾತ್ರೆಮಾಡಿ ದೇವರಕ್ರಪಗೆ ಪಾತ್ರರಾದರು.