ಗ್ರಾಮದೇವಿ ಜಾತ್ರೆ ಯಶಸ್ವಿಗೆ ಶ್ರಮಿಸಿದ ರೈತರು, ಹಿರಿಯರಿಗೆ ಶಾಸಕ ವೈದ್ಯ ಸನ್ಮಾನ

ಗ್ರಾಮದೇವಿ ಜಾತ್ರೆ ಯಶಸ್ವಿಗೆ ಶ್ರಮಿಸಿದ ರೈತರು, ಹಿರಿಯರಿಗೆ ಶಾಸಕ ವೈದ್ಯ ಸನ್ಮಾನ  MLA Dr. felicitates farmers and elders who worked hard to make Grama Devi Fair a success

ಸವದತ್ತಿ 24: ಇತ್ತೀಚೆಗೆ ಅತ್ಯಂತ ವೈಭವ ಹಾಗೂ ಸೌಹಾರ್ದತೆಯಿಂದ ಜರುಗಿದ ಸವದತ್ತಿ ನಗರದ ಗ್ರಾಮದೇವಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ 16 ಮನೆತನದ ರೈತರಿಗೆ ಹಾಗೂ ಊರಿನ ಪ್ರಮುಖ ಹಿರಿಯರನ್ನು ಶಾಸಕ ವಿಶ್ವಾಸ ವೈದ್ಯ ಅವರು ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.  

ಬಳಿಕ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾದ ಗ್ರಾಮದೇವಿ ಜಾತ್ರಾ ಮಹೋತ್ಸವವು ಇಡೀ ಊರಿನ ಜನರನ್ನು ಒಗ್ಗೂಡಿಸುವ ಅದ್ಭುತ ಶಕ್ತಿಯಾಗಿದೆ. ಈ ಭವ್ಯ ಹಬ್ಬದ ಯಶಸ್ಸಿನ ಹಿಂದೆ 16 ಮನೆತನದ ರೈತರ ಮತ್ತು ಊರಿನ ಹಿರಿಯರ ನಿಸ್ವಾರ್ಥ ಸೇವೆ ಹಾಗೂ ಅಪಾರ ಶ್ರಮ ಅಡಗಿದೆ. ಇವರೆಲ್ಲರೂ ಒಟ್ಟಾಗಿ ಸೇರಿ ಜಾತ್ರೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟಿರುವುದು ಶ್ಲಾಘನೀಯ, ಎಂದು ಪ್ರಶಂಸಿಸಿದರು.   

ಹಿರಿಯರು ಹಾಕಿಕೊಟ್ಟ ಈ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ಯಥಾವತ್ತಾಗಿ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ದು ಸತ್ಕರಿಸುತ್ತಿರುವುದು ನನ್ನ ಸೌಭಾಗ್ಯ ಎಂದರು.  

ಭರಮಪ್ಪ ಅಣಿಗೇರಿ, ಅಶ್ವಥ್ ವೈದ್ಯ, ಬಸವರಾಜ ಹಂಪಣ್ಣವರ, ಪ್ರಭು ಪ್ರಭನವರ, ಶಿವಾನಂದ ಹೂಗಾರ, ಚಂದ್ರು ಶ್ಯಾಮರಾಯನವರ, ಪ್ರವೀಣ್ ರಾಮಪ್ಪನವರ, ಸುರೇಶ ತುಪ್ಪದ, ಸಂತೋಷ ನೊರೆವರ, ಮಂಜುನಾಥ ಪಾಚಂಗಿ, ಮಹಾಬಲೇಶ್ವರ ಪುರದಗುಡಿ, ಶಿವಕುಮಾರ್ ರಾಠೂಡ್, ಬಸವರಾಜ ಗುರಣ್ಣವರ ಹಾಗೂ ಸನ್ಮಾನಿತರಾದ 16 ಮನೆತನದ ರೈತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.