ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಪರಿಸರ ಹಾಗೂ ನೈಸರ್ಗಿಕ ಅರಿವು ಮೂಡಲಿ
Let the children become environmentally and naturally aware at the closing ceremony of the children'
ಲೋಕದರ್ಶನ ವರದಿ
ಮುಗಳಖೋಡ 24: ಇಂದಿನ ಮಕ್ಕಳಲ್ಲಿ ಪರಿಸರ ಹಾಗೂ ನೈಸರ್ಗಿಕದ ಅರಿವು ಮೂಡಿಬೇಕು. ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರ ಮುಖಾಂತರ ಸುಂದರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಬೆಳಗಾವಿಯ ಅದಮ್ಯ ಫೌಂಡೇಶನ್ ರೂವಾರಿ ಹಾಗೂ ಪತ್ರಕರ್ತ ವಿನಾಯಕ ಮಠಪತಿ ಹೇಳಿದರು. ಅವರು ಶುಕ್ರವಾರ ಪಟ್ಟಣದ ಚೈಲ್ಡ್ ಸ್ಕಿಲ್ ಸೆಂಟರ್ ಧಾರವಾಡ ಹಾಗೂ ಅರಭಾವಿ ಫೌಂಡೇಶನ್ ಮುಗಳಖೋಡ ವತಿಯಿಂದ ಏಪ್ರಿಲ್ 4 ರಿಂದ ಮೇ 14ರ ವರೆಗೆ 40 ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರ ಕರಾವಳಿ ಶಿಕ್ಷಕರಿಂದ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಬಾಲ್ಯದಲ್ಲಿಯೇ ಪರಿಸರದ ಕಾಳಜಿಯನ್ನು ಮಕ್ಕಳಲ್ಲಿ ಬಿತ್ತಿದಾಗ ಅದರ ಅರಿವಿನಿಂದ ಸಸ್ಯ ಹಾಗೂ ಪ್ರಾಣಿ ಸಂಕುಲದ ಜೊತೆಗೆ ಮಾನವನ ಉಳಿಯುವ ಅತ್ಯಗತ್ಯವಾಗಿದೆ. ಅರಭಾವಿ ಫಾರ್ಮ್ ಹೌಸ್ ನಲ್ಲಿ ಮಕ್ಕಳಲ್ಲಿ ನಿಸರ್ಗ ಕಲಿಕೆ ಅಡಿಯಲ್ಲಿ ಪರಿಸರ ಪ್ರಜ್ಞೆ, ಕನ್ನಡತನ, ಭರತನಾಟ್ಯ, ಶಾಸ್ತ್ರೀಯ ಸಂಗೀತ , ಕಂಪ್ಯೂಟರ್ ಕಲಿಕೆ ,ಸ್ಪೋಕನ್ ಇಂಗ್ಲಿಷ್, ಸಂಸ್ಕಾರ, ಏರೋಬಿಕ್ಸ್ ,ಸಾಹಸಕ್ರೀಡೆ, ಜೊತೆಗೆ ಪರಿಸರ ಕಾಳಜಿ, ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ನಿಜಕ್ಕೂ ಶ್ಲಾಘನೀಯ ಎಂದರು.
ಮುಗಳಖೋಡದ ಸಮುದಾಯ ಆರೋಗ್ಯ ಕೇಂದ್ರದ ನೇತ್ರ ವೈದ್ಯಾಧಿಕಾರಿ ಅಶ್ವಿನಿ ಜುಗೂಳಿ ಮಾತನಾಡಿ, ಅರಭಾವಿ ಫೌಂಡೇಶನ್ ನಡೆಸುತ್ತಿರುವ ಗುರುಕುಲ ಮಾದರಿಯಲ್ಲಿ ಬಾಲ ಸಂಸ್ಕಾರ ಶಿಬಿರ ಮಕ್ಕಳಲ್ಲಿ ಆತ್ಮಸ್ಥೈರ್ಯ , ಶಿಕ್ಷಣ, ತಂತ್ರಜ್ಞಾನ, ಕಲೆ, ಸಾಹಿತ್ಯ, ಪರಿಸರ ಕಾಳಜಿ, ಯೋಗ ,ತರಬೇತಿಗಳು, ಸ್ವಾವಲಂಬಿ ಜೀವನ ನಡೆಸಲು ಪೂರಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇವುಗಳಲ್ಲಿ ಪಾಲ್ಗೊಂಡ ಮಕ್ಕಳು ಮನೆಯಲ್ಲಿ ಹಾಗೂ ಸಮಾಜದಲ್ಲಿ ಉತ್ತಮವಾಗಿ ಜೀವನ ನಿರ್ವಹಿಸುತ್ತಾರೆ . ಆದಕಾರಣ ನನ್ನ ಮಗನನ್ನು ಕೂಡ ಶಿಬಿರದಲ್ಲಿ 40 ದಿನಗಳ ಕಾಲ ಕಲಿಕೆಗೆ ಬಿಡಲಾಗಿದೆ ಎಂದರು.
ಅರಭಾವಿ ಫೌಂಡೇಶನ್ ಗೌರವ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಮಾರುತಿ ಅರಭಾವಿ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶಿಬಿರದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಧಾರವಾಡದ ಚೈಲ್ಡ್ ಸ್ಕಿಲ್ ಸೆಂಟರ್ನ ವ್ಯವಸ್ಥಾಪಕಿ ಅಶ್ವಿನಿ ಟಿ , ಅರಭಾವಿ ಫೌಂಡೇಶನ್ ಅಧ್ಯಕ್ಷ ಸಂತೋಷ ಅರಭಾವಿ, ಪತ್ರಕರ್ತ ಸಿ ಎಸ್ ಹಿರೇಮಠ , ಅಶೋಕ ಕದಂ , ಗುತ್ತಿಗೆದಾರ ಯಲ್ಲಾಲಿಂಗ ಗೋಕಾಕ , ಯುವ ಧುರೀಣ ಆನಂದ ಮೆಕ್ಕಳಕಿ, ಪೌರಕಾರ್ಮಿಕ ವಿಜಯ ನಡುವಿನಕೇರಿ , ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು. ಬಾಕ್ ಲೈನ್: ಮಕ್ಕಳು ಕರಾಟೆ, ಸಂಗೀತ, ಶಾಸ್ತ್ರೀಯ ಸಂಗೀತ , ಕಲೆ, ಸಾಹಿತ್ಯ, ಚಿತ್ರಕಲೆ, ನೃತ್ಯ, ಹಾಡುಗಾರಿಕೆ ,ಕೃಷಿ ,ತೋಟಗಾರಿಕೆ, ಪರಿಸರ ಪ್ರಜ್ಞೆ ಕಲಿತು ಸಮಾಜಮುಖಿಯಾಗುತ್ತಾರೆ . ಮುಂದಿನ ದಿನಮಾನಗಳಲ್ಲಿ ಮಕ್ಕಳಿಗಾಗಿ ಪ್ರಶಸ್ತಿ ಪ್ರಧಾನ ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 