ಲಕ್ಷ್ಮೇಶ್ವರ ತಾಲೂಕಿನಲ್ಲಿ ಡೀಸೆಲ್ ಅಭಾವ: ಪರದಾಡಿದ ಅನ್ನದಾತರು

ಲಕ್ಷ್ಮೇಶ್ವರ ತಾಲೂಕಿನಲ್ಲಿ ಡೀಸೆಲ್ ಅಭಾವ: ಪರದಾಡಿದ ಅನ್ನದಾತರು Diesel shortage in Lakshmeshwar taluk: Food providers in distress

ಲಕ್ಷ್ಮೇಶ್ವರ  24: "ತಾಲೂಕಿನಲ್ಲಿ ಉತ್ತಮ ಮಳೆ ಆಗು ತ್ತಿರುವುದರಿಂದ ರೈತರಲ್ಲಿ ಹರ್ಷವನ್ನು ತಂದಿದೆ ಇದರಿಂದ ಮುಂಗಾರು ಬಿತ್ತನೆಯ ಚಟುವಟಿಕೆಯ ಕಾರ್ಯ ಚುರುಕುಗೊಂಡಿವೆ ಇಂಥ ಸಮಯದಲ್ಲಿ ರೈತರಿಗೆ ಅವಶ್ಯವಾಗಿ ಟ್ರ್ಯಕ್ಟರ್ ಮೂಲಕ ಉಳುಮೆ ಮಾಡಲು ಡೀಸೆಲ್ ಅವಶ್ಯ ಆದರೆ ಇಂಥ ಸಮಯದಲ್ಲಿ ಡೀಸೆಲ್ ಅಬಾವ ಕೇಳಿ ಬರುತ್ತಿದೆ ಇದರಿಂದ ರೈತರು ಡೀಸೆಲ್ ಗೆ ಪರದಾಡುವ ಪರಿಸ್ಥಿತಿ ಕಂಡು ಬರುತ್ತಿದೆ ಪಟ್ಟಣದ ಮಂಜುಲಾಪುರ ರಸ್ತೆಯಲ್ಲಿ ಇರುವ ಎಚ್ ಪಿ ಪೆಟ್ರೋಲ್ ಬಂಕ್ ನಲ್ಲಿ ಶನಿವಾರ ರಾತ್ರಿ 10:30 ರ ಸುಮಾರು ಪಟ್ಟಣದ ಉಳಿದ ಎಲ್ಲಾ ಬಂಕಗಳಲ್ಲಿ ಡೀಸೆಲ್ ಇಲ್ಲಾ ಎಂದು ಕೇಳಿ ಬಂದ ಕಾರಣ ಡೀಸೆಲ್ ಇರುವ ಇದೇ ಒಂದು ಬಂಕಗೆ ರಾತ್ರಿ ಉಳುಮೆ ಮಾಡಲು ಜಮೀನಿಗೆ ತೆರಳುವ ಅನ್ನದಾತರು ಡೀಸೆಲ್ ಪಡೆದುಕೊಳ್ಳಲು ಬಂಕನ ಮುಂದೆ ಸಾಲುಗಟ್ಟಿ ನಿಂತು ಡೀಸೆಲ್ ಗಾಗಿ ಪರದಾಡುತ್ತಿರುವುದು ಕಂಡುಬಂದಿತು ಸರ್ಕಾರ ಕೃಷಿ ಚಟುವಟಿಕೆಗಳು ಬರದಿಂದ ಸಾಗುವ ಇಂಥ ಸಮಯದಲ್ಲಿ ಸಮರ​‍್ಕವಾಗಿ ಡೀಸೆಲ್ ಪೆಟ್ರೋಲ್ ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.