ಪಂಢರಪುರಕ್ಕೆ 11,551 ರೊಟ್ಟಿಯನ್ನು ದಾಸೋಹಕ್ಕೆ ನೀಡಿದ ಹಂದಿಗುಂದ ಗ್ರಾಮದ ಭಕ್ತರು;

ಪಂಢರಪುರಕ್ಕೆ 11,551 ರೊಟ್ಟಿಯನ್ನು ದಾಸೋಹಕ್ಕೆ ನೀಡಿದ ಹಂದಿಗುಂದ ಗ್ರಾಮದ ಭಕ್ತರು; Devotees from Handigund village donated 11,551 rotis to Pandharpur for Dasoha;

ಪಾಲಬಾವಿ 24 :  ಮಹಾರಾಷ್ಟ್ರ ರಾಜ್ಯದ ಹಲವಾರು ಪುಣ್ಯಕ್ಷೇತ್ರದಲ್ಲಿ ಒಂದಾಗಿರುವ ಪಂಢರಪುರ ವಿಠ್ಠಲನ ಪುಣ್ಯ ಕ್ಷೇತ್ರವು ಒಂದಾಗಿದೆ. ಪಂಢರಪುರ ವಿಠ್ಠಲನ ಕರಕಮಲ ಸಜಾತರು, ಪರಮ ಶಿಷ್ಯರು ಜಗದ್ಗುರು ತುಕಾರಾಮ ಮಹಾರಾಜರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಮಹಾರಾಷ್ಟ್ರದ ದೇಗು ಗ್ರಾಮದಲ್ಲಿ ನಡೆಯುತ್ತಿರುವ ತುಕಾರಾಮರ ಅಖಂಡ ಹರಿನಾಮಸ್ಮರಣೆಯ ಸತ್ಸಂಗ ಕಾರ್ಯಕ್ರಮದ ನಿಮಿತ್ಯವಾಗಿ  ದಾಸೋಹಕ್ಕೆ  ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಶ್ರೀ ವಿಠ್ಠಲ -ರುಕ್ಮಿಣಿ ದೇವಸ್ಥಾನದ ಕಮಿಟಿಯವರು ಹಾಗೂ ಗ್ರಾಮಸ್ಥರು ಸೇರಿಕೊಂಡು 11,551 ರೊಟ್ಟಿಗೆಗಳನ್ನು ದಾಸೋಹಕ್ಕೆ ನೀಡಲು ಹೊರಟಿರುವುದು ಹೆಮ್ಮೆಯ ಸಂಗತಿಯಾಗಿದೆ.

"ಪಂಢರಪುರದ ಪುಣ್ಯ ಕ್ಷೇತ್ರದ ಪಕ್ಕದಲ್ಲಿರುವ ದೇಗು ಗ್ರಾಮದಲ್ಲಿ ಪಂಢರಪುರ  ವಿಠ್ಠಲ ದೇವರ  ಪರಮ ಶಿಷ್ಯರು ಜಗದ್ಗುರು ತುಕಾರಾಮರ ಮಹಾರಾಜರ ಅಖಂಡ ಹರಿನಾಮ ಸಪ್ತಾಹ ಸತ್ಸಂಗ ಕಾರ್ಯಕ್ರಮವು ಇದೇ ಮೇ17 ರಿಂದ 24ರ ವರೆಗೆ ಜಗದ್ಗುರು ತುಕಾರಾಮರ ಗೀತಾ ಪಾರಾಯಣ ನಡೆಯುತ್ತಿದ್ದು, ದಾಸೋಹದ ಕಮಿಟಿಯವರು ನಮಗೆ ಕರೆ ಮಾಡಿ ಹಂದಿಗುಂದ ಗ್ರಾಮದಿಂದ ದಾಸೋಹಕ್ಕೆ ಏನಾದರೂ ತಣ್ಣೀರಿ ಎಂದು ಹೇಳಿದಾಗ ನಾವೆಲ್ಲರೂ ಗ್ರಾಮಸ್ಥರು, ಭಕ್ತರು ಸೇರಿಕೊಂಡು ಅಂದಾಜು 11,551 ರೊಟ್ಟಿಗಳನ್ನು ದಾಸೋಹಕ್ಕೆ ಸಮರ​‍್ಿಸಿದ್ದು ನಮಗೆ ತುಂಬಾ ಆನಂದವಾಗಿದೆ. ಶ್ರೀ ವಿಠಲ-ರುಕ್ಮಿಣಿ ಹಾಗೂ ಜಗದ್ಗುರು ತುಕಾರಾಮ ಮಹಾರಾಜರ ಆಶೀರ್ವಾದವು ನಮ್ಮ ಗ್ರಾಮದ ಭಕ್ತರ ಮೇಲೆ ಇರಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ" ಗೂಳಪ್ಪ ಬಿರಡಿ, ಮಹಾರಾಜರು (ಶ್ರೀ ವಿಠ್ಠಲ -ರುಕ್ಮಿಣಿ ದೇವಸ್ಥಾನದ ಮುಖ್ಯಸ್ಥರು, ಹಂದಿಗುಂದ)ಈ ಸಂದರ್ಭದಲ್ಲಿ ಹಿರಿಯರಾದ ಗೂಳಪ್ಪ ಬೀರಡಿ ಮಹಾರಾಜರು, ಬಸಪ್ಪ ಗೊಲಬಾವಿ, ಲಕ್ಷ್ಮಣ ಜಗದಾಳ, ಶ್ರೀಶೈಲು ಹೊಸಾಲಿ, ಹಿರಿಯರಾದ ಶ್ರೀಶೈಲ ಮಿರ್ಜಿ, ಅಭಿಷೇಕ ನಾಯಿಕ, ಸೂರ​‍್ಪ ಕಪ್ಪಲಗುದ್ದಿ, ಶಿವಲಿಂಗ ಚಿಂಚಲಿ, ಮಲ್ಲು ಬಾಗೇವಾಡಿ, ಅಲ್ಲಪ್ಪ ನಾಯಿಕ, ಲಕ್ಷ್ಮಿಬಾಯಿ ಪಾಟೀಲ, ಲಕ್ಷ್ಮವ್ವ ಬಾಗೇವಾಡಿ, ನೀಲವ್ವ ಬಾಗೇವಾಡಿ, ಜಯಶ್ರೀ ಬಾಗೇವಾಡಿ, ಸುಮಿತ್ರಾ ಮೈಗೂರ, ಕಮಲವ್ವ ಮೈಗೂರ ಇತರರು ಇದ್ದರು.