ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆ ಬೆಸಿಗೆಯ ಶಿಬಿರದ ಸಮಾರೋಪ ಸಮಾರಂಭ

ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆ ಬೆಸಿಗೆಯ ಶಿಬಿರದ ಸಮಾರೋಪ ಸಮಾರಂಭ  Bhima Universal Central School Summer Camp Closing Ceremony

ಲೋಕದರ್ಶನ ವರದಿ 

       ಸಿಂದಗಿ 24 : ಉತ್ತರ ಕರ್ನಾಟಕ ಭಾಗದಲ್ಲಿ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆ ಪ್ರತಿಷ್ಠತ ಶಾಲೆಯಾಗಿ ಹೊರಹೊಮ್ಮಿದೆ, ಪ್ರಸ್ತುತ ವರ್ಷ 2025-26 ಸಾಲಿನ ಸಿ,ಬಿ,ಎಸ್,ಸಿ,ಇ 10 ತರಗತಿಯ ಮಕ್ಕಳು  ಶೇ100ಅ ರಷ್ಟು ಫಲಿತಾಂಶ ಹಾಗೂ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ಶಾಲೆಯ ಕೀರ್ತಿ ಹೆಚ್ಚಿಸಿದೆ, ಶಾಲೆ ಅಧ್ಯಕ್ಷರಾದ ವಿಠ್ಠಲ ಜಿ.ಕೊಳೂರು ಅಭಿಮತ ವ್ಯಕ್ತಪಡಿಸಿದರು. 

      ನಗರದ ಹೊರ ವಲಯದಲ್ಲಿರುವ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ  ಹಮ್ಮಿಕೊಂಡ ಬೆಸಿಗೆಯ ಶಿಬಿರದ ಸಮಾರೋಪ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಸಿಗೆ ಶಿಬಿರ ವಿನೂತನ, ಸೃಜನಾತ್ಮಕ ಚಟುವಟಿಕೆ. ಮೂಲಕ ಮಕ್ಕಳಲ್ಲಿ ಸರಳ ರೀತಿಯಲ್ಲಿ ಇಂಗ್ಲೀಷ ಕಲಿಕೆ, ನೃತ್ಯ, ಹಾಡು, ಕರಾಟೆ, ಯೋಗ. ಕ್ರೀಡೆ, ಚಿತ್ರಕಲೆ, ಸಂಗೀತ ಮೂಲಕ ಮಕ್ಕಳಲ್ಲಿ ಸರ್ವೋತ್ತಮುಖ ಅಭಿವೃದ್ಧಿ  ಕಲಿಕೆಯ ಮೂಲಕ  ಜೀವನದಲ್ಲಿ ಉತ್ತಮವಾದ ಸಂಸ್ಕಾರವನ್ನು , ಮಾನವಿಯತೆ ಮೌಲ್ಯವನ್ನು ಬೆಳೆಸಲು  ವಿಶೇಷವಾದ ವಿಷಯಗಳ ಮೂಲಕ  ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ್ತಿದ್ದಾರೆ, ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳ  ಉಜ್ವಲ ಭವಿಷ್ಯ ನಿರ್ಮಾಣ ಮಾಡವಲ್ಲಿ ನಮ್ಮ ಶಾಲೆ ಸುಮಾರು 16 ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನ ನಿಸ್ವಾರ್ಥ ಸೇವೆ ಸಂಸ್ಥೆ ಸಲ್ಲಿಸುತ್ತದೆ ಎಂದರು.  

     ನ್ಯಾಯವಾದಿ ಶಿರಣಪ್ಪ ಸಿಂಗಾಡಿ ಮಾತನಾಡಿ, ಶಾಲೆಯು ದಿನೆದಿನೆ ಉತ್ತಮ ರೀತಿಯಲ್ಲಿ ಬೆಳೆಯುವುದರ ಜೋತೆ ಇಲ್ಲಿ ಮಕ್ಕಳು ಐ,ಐ,ಟಿ, ಎಮ್‌. ಬಿ.ಬಿ.ಎಸ್‌. ಎಂ.ಡಿ, ಎಂಜಿನಿಯರ್, ವಿವಿಧ ಸರ್ಕಾರಿ ಇಲಾಖೆಯಲ್ಲಿ ನೌಕರರಾಗಿದ್ದಾರೆ, ಎಂದು ಹೇಳಿ ಸಂಸ್ಥೆಯ ಸಾಧನೆ ಮೆಚ್ಚಿಗೆ ವ್ಯಕ್ತಪಡಿಸಿದರು,  ಈ ಇದೇ ಸಂದರ್ಭದಲ್ಲಿ ಶಾಲೆಯ ಆದ್ಯಕ್ಷ ವಿಠ್ಠಲ ಜಿ. ಕೊಳ್ಖೂರು ಅವರನ್ನು  ಸನ್ಮಾಸಿ ಗೌರವಿಸಿದರು.   ಪಾಲಕರಾದ ಹಮ್ಮಿದ್ ಅವಟಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಭೀಮಾ ಶಾಲೆಯೂ ವರ್ಷ ಕಳೆದಂತೆಲ್ಲಾ  ಶಾಲೆಯ ಕೀರ್ತಿ ಉತ್ತುಂಗ ಸ್ಥಾನದತ್ತ ಬೆಳೆಯುತ್ತಾ ತನ್ನದೆ ಛಾಪನ್ನು ಮೂಡಿಸುವುದರ ಜೋತೆಗೆ ಮಕ್ಕಳ ಭವಿಷ್ಯ ಉಜ್ವಲಗೊಳಿಸುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. 

       ಸಿದ್ದಮ್ಮ ಪಾಲಕರು ಮಾತನಾಡಿ, ಮಕ್ಕಳಲ್ಲಿ ಸುಪ್ತವಾಗಿ ಹುದುಗಿರು ಪ್ರತಿಭೆಯನ್ನು ಬೇಸಿಗೆ ಶಿಬಿರದಲ್ಲಿ ಅವರ ಆಸಕ್ತಿದಾಯಕ ವಿಷಯಗಳ ಕಲಿತ್ತಾ ಮಕ್ಕಳಲ್ಲಿ ಹೊಸ ವಿಷಯಗಳು ಕಲಿಯುವುದರ ಜೋತೆಗೆ ತಮ್ಮಲ್ಲಿರು ಪ್ರತಿಭೆಯನ್ನು  ಗುರ್ತಿಸಲು ಸೂಕ್ತ ತರಬೇತಿ ನಿಡಲಾಗಿದೆ ವಿಶೇಷವಾಗಿ ಶಿಕ್ಷಕರಿಗೆ, ಪ್ರಾಂಶುಪಾಲರಿಗೆ ಅಭಿನಂದನೆ ಸಲ್ಲುಸುವೆ ಎಂದರು. ಪ್ರಾಂಶುಪಾಲೆ ಶಾಹಿನ್ ಶೇಖ ಬೆಸಿಗೆ ಶಿಬಿರ ವರದಿ ವಾಚನಾ ಮಾಡಿದರು. ಒಂದೂವರೆ ತಿಂಗಳು ಕಾಲ ಸಾಗಿ ಬಂದ ಬೇಸಿಗೆ ಶಿಬಿರದಲ್ಲಿ ಮಕ್ಕಳು ಸಂಗೀತ, ನೃತ್ಯ, ಯೋಗ, ಕರಾಟೆಯಂಥ ಚಟುವಟಿಕೆ ವೇದಿಕೆ ಮೇಲೆ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರಾದ ಜಿ.ಕೆ,ಪಡಗಾನೂರ, ಶರಣು ಮಾವೂರ, ಭೀಮಾಶಂಕರ ತಾರಾಪುರ ಶಿಕ್ಷಕ ವೃಂದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.