206ನೇ ದಿನದ ಬಲ್ಡೋಟ ತೊಲಗಿಸಿ ಧರಣಿ ಯಶಸ್ವಿ;ಕೊಪ್ಪಳ: ನಗರಸಭೆ ಮುಂದೆ ಬಲ್ಡೋಟ ತೊಲಗಿಸಿ

206ನೇ ದಿನದ ಬಲ್ಡೋಟ ತೊಲಗಿಸಿ ಧರಣಿ ಯಶಸ್ವಿ;ಕೊಪ್ಪಳ: ನಗರಸಭೆ ಮುಂದೆ ಬಲ್ಡೋಟ ತೊಲಗಿಸಿ  206th day of the protest against the removal of the bulldozers is a success; Koppal: The bulldozers

ಕೊಪ್ಪಳ 24: ಭಾಗ್ಯನಗರ ಉಳಿಸಿ 206ನೇ ದಿನದ ಧರಣಿ ಮುಂದುವರಿಯಿತು. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹಿರೇಬಗನಾಳ ಗ್ರಾಮದಲ್ಲಿ ಬಾಧಿತರ ದೂರು ಆಧರಸಿ ಬಹಿರಂಗ ಸಭೆ ನಡೆಸಿ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ವಿಫಲವಾದ ಸ್ಪಾಂಜ್ ಐರನ್ ಘಟಕಗಳ ಮಾಲಿನ್ಯದ ಮೇಲೆ ಪರಿಶೋಧನಾ ವರದಿ ಮಾಡಿಸಿದ್ದೇನೆ. ಐದು ಕಾರ್ಖಾನೆಗಳಿಗೆ ಎನ್‌.ಪಿ.ಡಿ ಸೂಚನಾ ಪತ್ರ ಕೊಡಲಾಗಿದೆ. ಆ ಕಾರ್ಖಾನೆಗಳು ಎಷ್ಟೇ ದೊಡ್ಡವರದಿರಲಿ ಅವುಗಳ ಮೇಲೆ ಕ್ರಮ ಜರುಗಿಸುತ್ತೇವೆ ಎಂದಿದ್ದರು. ಈಗ ತಡವಾಗಿಯಾದರೂ ಮಾಲಿನ್ಯ ಮಾಡುತ್ತಿರುವ ಕಾರ್ಖಾನೆಗಳನ್ನು ಮುಚ್ಚುತ್ತಿರುವದನ್ನು ಕೊಪ್ಪಳ ಜಿಲ್ಲಾ ಬಚಾವೋ ಆಂಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಸ್ವಾಗತಿಸಿತ್ತು.

ಆದರೆ ಅವರು ಬೀಗ ಮುದ್ರೆಯ ಕ್ರಮ ಮಾಡಿದ್ದರಲ್ಲಿ ಹೊಸಪೇಟೆ ಇಸ್ಪಾತ್ ಮೂರು ವರ್ಷಗಳ ಹಿಂದೆಯೇ ತನ್ನ ಕಾರ್ಯಾಚರಣೆ ನಿಲ್ಲಿಸಿತ್ತು. ಇದಕ್ಕೆ ಮುಚ್ಚುವ ಆದೇಶ ಮಾಡಿದ್ದು ಯಾವ ಉದ್ದೇಶವಿದೆ ಗೊತ್ತಾಗಿಲ್ಲ. ಇಂದು ಬೀಗಮುದ್ರೆ ಮಾಡಿದ ಪಿ.ಬಿ.ಎಸ್ ಪವರ್ ಆಂಡ್ ಸ್ಟೀಲ್ ಕಾರ್ಖಾನೆ ಜತೆಗೆ ಇದರ ಎರಡನೇ ಘಟಕ, ಹೋಸಪೇಟೆ ಶಾಸಕ ಎಚ್‌.ಆರ್‌. ಗವಿಯಪ್ಪ ಮಾಲಿಕತ್ವದ  ಎಚ್‌.ಆರಿ​‍್ಜ. ಅಲಾಯ್ಸ್‌, ಹಿರೇಬಗನಾಳ ಹತ್ತಿರದ ವನ್ಯಾ ಸ್ಟೀಲ್ ಘಟಕಗಳು, ತನುಷ್ ಎರಡು ಘಟಕಗಳು, ಠಾಕೂರ್ ಇಂಡಸ್ಟ್ರಿ , ಐ.ಎಲ್‌.ಸಿ ಸ್ಟೀಲ್, ಎಸ್‌.ಕೆ. ಸೂಪರ್ ಸ್ಟೀಲ್, ಕೆ.ಪಿ.ಆರ್ ಆಗ್ರೋ ಕೆಮ್, ಭದ್ರಶ್ರೀ ಸ್ಟೀಲ್, ಬಾಬಾ ಅಖಿಲ್ ಸಾಯಿಜ್ಯೋತಿ, ಧ್ರುವದೇಶ ಸ್ಟೀಲ್,  ಎಕ್ಸಿಂಡಿಯಾ ಮತ್ತು ಕೊಪ್ಪಳ ಶೇ.40 ಭಾಗ ಮಾಲಿನ್ಯ ಮಾಡುತ್ತಿರುವ ಬಲ್ಡೋಟ ಎಂ.ಎಸ್‌.ಪಿ.ಎಲ್ ಪೆಲ್ಲೆಟ್ ಘಟಕ, ಅಲ್ಟ್ರಟೆಕ್ ಸಿಮೆಂಟ್, ಸುಣ್ಣ ತಯಾರಿಸುವ ಕಾರ್ಖಾನೆಗಳು ಕೂಡ ಶಾಶ್ವತವಾಗಿ ಬಂದ್ ಆಗಬೇಕಿದೆ.

ಅಂದಾಗ ಮಾತ್ರ ಇಲ್ಲಿನ ಜನರ ಆರೋಗ್ಯ, ಜೀವ ಉಳಿಯುತ್ತದೆ. ಇಲ್ಲದೆ ಇದ್ದರೆ ನಿತ್ಯದ ಗೋಳು ಈ ಜನರಿಗೆ ತಪ್ಪುವುದಿಲ್ಲ, ತುಂಗಭದ್ರಾ ನೀರು ಕುಡಿಯಲು ಯೋಗ್ಯವಾಗಿ ಉಳಿಯುವದಿಲ್ಲ, ಅಂತರ್ಜಲ ಉಳಿಯುವುದಿಲ್ಲ, ಕೃಷಿ ಉಳಿಯುವುದಿಲ್ಲ ಎಂದು ಎಚ್ಚರಿಕೆಯನ್ನು ಬಾಧಿತ ಜನರು ಇಟ್ಟುಕೊಳ್ಳಲು ವೇದಿಕೆ ಕರೆಕೊಟ್ಟಿತು. ಅವಳಿ ನಗರದ ಜನರ ಆರೋಗ್ಯ ಹಾನಿ ಮಾಡುವ 54 ಸಾವಿರ ಕೋಟಿ ಹೂಡಿಕೆಯ ಸ್ಥಾಪನೆಗೆ ಮುಂದಾದ ಬಲ್ಡೋಟ ಕಾರ್ಖಾನೆ ಕುರಿತು ಗವಿಶ್ರೀಗಳು ಧರ್ಮಾದೇಶ ಮಾಡಿದಂತೆ ಈ ಹೂಡಿಕೆ ತಡೆದ ಆದೇಶ ಪತ್ರವನ್ನು ಜನಪ್ರತಿನಿಧಿಗಳು ತರಬೇಕು. ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2011ರಿಂದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕದಿಂದ ನಗರದ ಅರ್ಧ ಭಾಗ ಬಾಧಿತವಾಗುತ್ತಿದ್ದು, ನಗರದ ಜನರ ಆರೋಗ್ಯದ ದುಷ್ಪರಿಣಾಮ ತಡೆಯಲು ಈ ಘಟಕ ಬಂದ್ ಮಾಡಿ ಜನರ ಆರೋಗ್ಯ ಖಾತ್ರಿಪಡಿಸಸಬೇಕು.

ಬಲ್ಡೋಟ ಕಂಪನಿಯು ಬಸಾಪುರ ಗ್ರಾಮ ಕೆರೆಯನ್ನು ಅನಧಿಕೃತವಾಗಿ ಮಂಜೂರಿ ಹೆಸರಿನಲ್ಲಿ ವಶಪಡಿಸಿಕೊಂಡಿದ್ದು ಕಂಪನಿ ಹಾಕಿದ ಕಾಂಪೌಂಡ್ ತೆರವು ಮಾಡಿ ಜಾನುವಾರು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕು. ತುಂಗಭದ್ರ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು  ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು.

ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್‌.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕು ಎಂದು ಧರಣಿ ಆಗ್ರಹಿಸಿತು.ಧರಣಿಯಲ್ಲಿ ಸ್ವಚ್ಛ ವಿಧಾನಸಭೆ ಆಂದೋಲನ ಪಾದಯಾತ್ರಿ ನಾಗರಾಜ ಕಲ್ಲಕುಟುಗರ, ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ನಿವೃತ್ತ ಉಪನ್ಯಾಸಕ ಡಾ  ಬಸವರಾಜ ಪೂಜಾರ, ವಿನಯ ಸಜ್ಜನ್, ಶಿವಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಬಾವಿ, ಎಸ್‌. ಮಹಾದೇವಪ್ಪ ಮಾವಿನಮಡು, ಚೆನ್ನವೀರಯ್ಯ ಹಿರೇಮಠ ಕುಣಿಕೇರಿ, ಶಿವಪ್ಪ ಹಲಗೇರಿ, ಬಸವರಾಜಪ್ಪ ಶೆಟ್ಟರ್, ಮಾನವ ಬಂಧುತ್ವ ವೇದಿಕೆಯ ಬೆಟ್ಟಪ್ಪ ಯತ್ನಟ್ಟಿ, ಭೀಮಪ್ಪ ಯಲಬುರ್ಗಾ, ಗಂಗಮ್ಮ ಕುರುಗೋಡು ಪಾಲ್ಗೊಂಡರು.