ಸಂಭ್ರಮದ ಕಂಠಿ ಬಸವೇಶ್ವರ ಸ್ವಾಮಿಯ ರಥೋತ್ಸವ

Rathotsava of Basaveshwara Swami is the song of celebration

ಸಂಭ್ರಮದ ಕಂಠಿ ಬಸವೇಶ್ವರ ಸ್ವಾಮಿಯ ರಥೋತ್ಸವ

ಹೂವಿನಹಡಗಲಿ 09: ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಕಂಠಿ ಬಸವೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ದೇವಸ್ಥಾನದಿಂದ ಅಲಂಕೃತ ಪಲ್ಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. 

ಮಹಾಮಂಗಳಾರತಿ ಬಳಿಕ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ರಥೋತ್ಸವ ಚಾಲನೆ ಪಡೆದುಕೊಂಡಿತು. ಸಮಾಳ, ನಂದಿಕೋಲು ಮಂಗಳವಾದ್ಯಗಳು ವಿಜೃಂಭಣೆಯ ರಥೋತ್ಸವ ಮೆರಗು ತಂದಿದ್ದವು. ರಥ ಬೀದಿಯಲ್ಲಿ ನೆರೆದಿದ್ದ ಜನರು ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿಯಿಂದ ಕೈ ಮುಗಿದರು. ಇದಕ್ಕೂ ಮುನ್ನ ಜರುಗಿದ ನಿಶಾನೆ ಹರಾಜಿನಲ್ಲಿ ವಿ.ಬಿ.ಮಲ್ಲಿಕೇಶ್  1.55 ಲಕ್ಷಕ್ಕೆ ಸ್ವಾಮಿಯ ಪಟ ಪಡೆದರು. ಕಂಠಿಬಸವೇಶ್ವರ ಟ್ರಸ್ಟ್‌ ಕಮಿಟಿ  ಅದ್ಯಕ್ಷ  ವಿ.ಬಿ.ಕರಿಬಸವರಾಜಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು. ನಂದಿಹಳ್ಳಿ ಸುತ್ತಮುತ್ತಲ ಗ್ರಾಮಗಳ ಅಪಾರ ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು.