ದೇಶದ ಸ್ವಾಂತಂತ್ರ್ಯ ಸಂಗ್ರಾಮ ವೇಳೆಯಲ್ಲಿ ಪ್ರಾರಂಭವಾಗಿರುವ ಗಣೇಶ ಚತುಥ್ರಿ ಹಬ್ಬವು ಇಲ್ಲಿಯವರೆಗೆ ಯಾವದೇ ಕಾರಣದ ಹಿನ್ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೆ ಪ್ರತಿವರ್ಷವು ತನ್ನ ಅಂದವನ್ನು ಹೆಚ್ಚಿಸಿಕೊಳ್ಳುತ್ತ ಬಂದಿರುವ ಗಣೇಶ ಹಬ್ಬವು ಈ ಬಾರಿ ಮಾತ್ರ ಕೊರೊನಾ ಕಂಟಕದಿಂದ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಪ್ರತಿವರ್ಷ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ತಮ್ಮ ಕುಟುಂಬ ನಿರ್ವಹಣೆಯನ್ನು ಮಾಡಿಕೊಂಡು ಬರುತ್ತಿದ್ದ ಗಣೇಶ ಮೂರ್ತಿ ತಯಾರಿಕರ ಸಾವಿರಾರು ಕುಟುಂಬಗಳು ಆಥರ್ಿಕ ಸಂಕಷ್ಟದ ಸುಳಿಯಲ್ಲಿ ಸಿಕ್ಕು ನರಳಾಡುವಂತಾಗಿದೆ. ಈ ಹಿನ್ನೆಲೆ ಈ ಬಾರಿಯಲ್ಲಿ ತಯಾರಿಕರಿಗೆ ಹಾಗೂ ವಿಘ್ನ ನಿವಾರಕ ಗಣೇಶನಿಗೂ ಅಕ್ಷರಶಃ ಕೊರೊನಾ ಸೋಂಕು ವಿಘ್ನವಾಗಿ ಕಾಡಿದೆ.
ಗಣೇಶ ಹಬ್ಬವು ಇನ್ನೂ 3 ಅಥವಾ 4 ತಿಂಗಳ ಇರುವಾಗಲೆ ಮೂರ್ತಿ ತಯಾರಿಕರು ಗಣೇಶ ಮೂರ್ತಿಗಳನ್ನು ತಯಾರಿಯಲ್ಲಿ ತೊಡಗುತ್ತಾರೆ. ಆದರೆ ಈ ಬಾರಿ ಮಾತ್ರ ರಾಜ್ಯ ಸರಕಾರ ಧ್ವಂದ ನೀತಿಯಿಂದ ಗಣೇಶನ ಮೂರ್ತಿಕಾರರು ಮಾತ್ರ ಕೊರೊನಾ ಹೊಡೆತದ ಸಂಕಂಷ್ಟದ ಸುಳಿಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಇದರಿಂದ ವಿಘ್ನವಿನಾಶಕ ಎಂದೇ ಕರೆಯಲಾಗುವ ವಿಘ್ನಣೇಶನಿಗೆ ಕೊರೊನಾ ಕಂಟಕ ಎದುರಾಗಿದೆ ಎನ್ನುವದು ಭಾಸವಾಗುತ್ತಿದೆ. ಇದರ ಜೊತೆಗೆ ಈ ಬಾರಿ ಕೆಲವು ಗಣೇಶ ಮೂತರ್ಿ ತಯಾರಿಕರು ತಮ್ಮ ತಮ್ಮ ಮೂರ್ತಿ ತಯಾರಿಕಾ ವೃತ್ತಿಗೆ ಗುಡ್ ಬೈ ಹೇಳಿ ಬೇರೆ ಕೆಲಸ ಕಾರ್ಯಗಳಲ್ಲಿ ತಮ್ಮ ತೊಂಡಗಿಸಿಕೊಂಡಿರುವದು ದುತಂತವಾಗಿದೆ.
ಪ್ರತಿವರ್ಷವು 3ರಿಂದ 4 ತಿಂಗಳೂ ಮುಂಚಿತವಾಗಿಯೇ ಹಲವಾರು ಭಾಗಗಳಿಂದ ಜಡಿ ಮಣ್ಣು ತಂದು ಅದನ್ನು ಹದವಾಗಿಸಿಕೊಂಡು ಗಣೇಶ ಮೂರ್ತಿಗಳನ್ನು ತಯಾರಿಸಲು ತವಕದಲ್ಲಿ ಇರುತ್ತಿದ್ದ ಮೂರ್ತಿಕಾರರು ಮಾತ್ರ ಈ ಬಾರಿಯ ಕೊರೊನಾ ಕಂಟಕದಿಂದ ದಿಕ್ಕು ತೋಚದಂತಾಗಿದ್ದು, ಇದರಿಂದ ತಿವ್ರ ತರಹದ ಆಥರ್ಿಕ ಸಂಕಷ್ಟಕ್ಕೆ ಗಣೇಶನ ಮೂರ್ತಿಕಾರರು ಸಿಲುಕಿ ನರಳಾಡುವಂತಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಕಳೆದ ಕೆಲವು ತಿಂಗಳುಗಳ ಹಿಂದೆ ಗಣೇಶ ಚತುಥರ್ಿ ಹಬ್ಬವನ್ನು ಆಚರಿಸಲು ನಿರ್ಭಂದ ಹೇರಿದ್ದ ರಾಜ್ಯ ಸರಕಾರ ಮನೆಗಳಲ್ಲಿ ಹಾಗೂ ಮಠ ಮಂದಿರಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ಮಾತ್ರ ಅವಕಾಶ ನೀಡಿತ್ತು. ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ನಿಷೇಧಿಸಿತ್ತು.
ಇದರ ವಿರುದ್ದವಾಗಿ ಕಳೆದ ಕೆಲವು ದಿನಗಳಿಂದ ಹಲವಾರು ಹಿಂದೂ ಸಂಘಟನೆಗಳು ಮತ್ತು ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳು ಗಣೇಶ ಹಬ್ಬ ಆಚರಣೆ ಅನುಮತಿ ನೀಡುವಂತೆ ಒತ್ತಾಯಿಸುತ್ತಿದ್ದವು. ಅದರಂತೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದವು. ಇವುಗಳ ಒತ್ತಡಕ್ಕೆ ಮನಿದಿರುವ ರಾಜ್ಯ ಸರಕಾರ ಕಳೆದ ಎರಡು ದಿನಗಳ ಹಿಂದಷ್ಠೆ ಕೆಲವು ಷರತ್ತುಬದ್ದ ಅನುಮತಿಯನ್ನು ನೀಡಿತ್ತು.
ಸರಕಾರ ಸಾರ್ವಜನಿಕವಾಗಿ ಗಣೇಶ ಉತ್ಸವಕ್ಕೆ ಷರತ್ತು ಬದ್ದ ಅನುಮತಿ ನೀಡಿರುವದು ನೋಡಿದರೆ ರೈಲು ಸ್ಟೇಶನ್ ಬಿಟ್ಟು ಹೋದ ಮೇಲೆ ಟಿಕೆಟು ನೀಡುವ ಕ್ರಮದಂತೆ ಸರಕಾರ ಈ ಆದೇಶ ಭಾಸವಾಗುತ್ತಿದೆ. ಯಾಕೇಂದರೆ 3 ರಿಂದ 4 ತಿಂಗಳ ಮೋದಲೇ ಎಲ್ಲ ಗಣೇಶ ಮೂರ್ತಿ ತಯಾರಿ ಮಾಡಿಕೊಳ್ಳಬೇಕಿದ್ದ ಮೂರ್ತಿ ತಯಾರಕರಿಗೆ ಮೊದಲು ಸರಕಾರ ನಿರ್ಭಂದ ಹೇರಿ ಬಳಿಕ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿರುವ ಕ್ರಮ.
ಅಲ್ಲದೆ, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಗಣೇಶ ಮೂರ್ತಿಗಳನ್ನು ತಯಾರಿಕೆ ಆರ್ಡರ್ ಮಾಡದೆ ದೂರ ಉಳಿದುಕೊಂಡಿದ್ದರು. ಈ ಹಿನ್ನಲೆ ಗಣೇಶ ಮೂರ್ತಿಗಳ ಬೇಡಿಕೆಗಳು ಕಡಿಮೆಯಾಗಿದ್ದವು. ಗಣೇಶ ಮೂರ್ತಿಗೆ ಬಳಸಲಾಗುತ್ತಿರುವ ನೀರು ಮಿಶ್ರಣದ ಬಣ್ಣ ಮತ್ತು ಮಣ್ಣಿನ ಬೆಲೆ ಗಗನಕ್ಕೆ ಏರಿಕೆಯಾಗಿರುವದು ಮೂರ್ತಿಕಾರರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ಕೆಲವು ಮೂರ್ತಿಕಾರರಿಗೆ ಮಾತ್ರ ಜಡಿ ಮಣ್ಣು ದೊರೆಯದ ಹಿನ್ನಲೆಯಲ್ಲಿ ಗಣೇಶ ಮೂರ್ತಿಗಳನ್ನು ಕಡಿಮೆ ಪ್ರಮಾಣದಲ್ಲಿ ತಯಾರಿ ಮಾಡಿದ್ದರೆ ಇನ್ನೂ ಕೆಲವರು ಮಣ್ಣು ಸಿಕ್ಕಿದ್ದರೂ ಸರಕಾರ ನಿರ್ಬಂಧದ ಆದೇಶ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಗಾತ್ರದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಮಾಡದಿರುವದರಿಂದ ನಷ್ಟ ಉಂಟಾಗಿದೆ.
ಒಟ್ಟಿನಲ್ಲಿ ಒಂದು ಕಡೆಯಲ್ಲಿ ಕೊರೊನಾ ಕಾಟ, ಇನ್ನೊಂದು ಕಡೆಯಲ್ಲಿ ಸರಕಾರದ ನಿರ್ಭಂಧ ಆದೇಶ, ಇವೇಲ್ಲದರ ನಡುವೆ ನಾಗರಿಕರು ಗಣೇಶ ಮೂರ್ತಿಗಳನ್ನು ಆಡರ್್ರ್ ಮಾಡಲು ಹಿಂದೇಟು ಹಾಕಿರುವದರಿಂದ ಗಣೇಶ ಮೂರ್ತಿಕಾರರು ವಿಘ್ನ ಎದುರಾಗಿರುವದು ಮಾತ್ರ ಮೂರ್ತಿಕಾರರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ.
ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತು ಬದ್ದ ಅನುಮತಿ: ಯಾವವು ಷರತ್ತುಗಳು
ಕೊರೊನಾ ಸೋಂಕಿನ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆಗೆ ನಿಬರ್ಂಧ ಹೇರಿದ್ದ ಸರಕಾರ ಸಂಘಟನೆಗಳ ಒತ್ತಡಕ್ಕೆ ಮನಿದ ಸರಕಾರ ಕೊನೆಯಲ್ಲಿ ಷರತ್ತು ಭದ್ದ ಅನುಮತಿ ನೀಡಿದೆ. ಈ ಅನುಮತಿ ಮಾತ್ರ ಗಣೇಶ ಮೂತರ್ಿಕಾರರಿಗೆ ಅನ್ವಯವಾಗದಂತಾಗಿದೆ. ಯಾಕೇಂದರೆ ಮೊದಲೆ ಮಣ್ಣು ಸಂಗ್ರಹಣೆ ವೇಳೆಯಲ್ಲಿ ನಿರ್ಭಂಧ ಹೆರಿ ಬಳಿಕ ಕೇವಲ ಕೆಲವೆ ದಿನಗಳು ಬಾಕಿ ಇರುವಾಗ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿರುವ ಕ್ರಮ.
* ಷರತ್ತುಗಳ ಏನೇಂದರೆ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲಾಗುವ ಗಣೇಶ ಮೂರ್ತಿಗಳು 4 ಅಡಿಗಳಿಗಿಂತ ಎತ್ತರ ಇರಕೂಡದು. ಗಣೇಶ ಮೂರ್ತಿ ತರುವ ವೇಳೆ ಹಾಗೂ ವಿಸರ್ಜನೆ ವೇಳೆ 20ಕಿಂತಲೂ ಹೆಚ್ಚು ಜನರು ಈ ಸಂದರ್ಭದಲ್ಲಿ ಸೇರುವಂತಿಲ್ಲ.
* ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಗಣೇಶೋತ್ಸವ ಮಂಡಳಿ ಅಥವಾ ಸಮಿತಿಗಳು ಸ್ಥಳೀಯ ಪುರಸಭೆ, ನಗರಸಭೆ, ಗ್ರಾಪಂಗಳ ಆಡಳಿತದಿಂದ ಪೂರ್ವಾನುಮತಿ ಪಡೆಯುವದು ಕಡ್ಡಾಯವಾಗಿದೆ. ಒಂದು ವಾಡ್ರ್ ಅಥವಾ ಗ್ರಾಮಕ್ಕೆ ಒಂದೇ ಸಾರ್ವಜನಿಕ ಗಣೇಶ ಮೂತರ್ಿ ಪ್ರತಿಷ್ಠಾಪನೆ ಮಾಡಲು ಪ್ರೋತ್ಸಹ ನೀಡುವಂತೆ ಮನವಿ ಮಾಡುವದು.
* ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆಯ ಸ್ಥಳದಲ್ಲಿ 20 ಜನಕ್ಕೆ ಸೀಮಿತವಾದ ಆವರಣ ನಿಮರ್ಿಸಬೇಕು. ಒಂದೇ ಬಾರಿಗೆ 20ಕ್ಕಿಂತ ಹೆಚ್ಚು ಭಕ್ತರು ಅಲ್ಲಿ ಸೇರದಂತೆ ಗಮನವಹಿಸಬೇಕು.
* ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ, ಸಂಗೀತ, ನೃತ್ಯ ಸೇರಿ ಯಾವುದೇ ಮನರಂಜನಾ ಕಾರ್ಯಕ್ರಮ ಆಯೋಜನೆಗೆ ಅವಕಾಶ ಇರುವದಿಲ್ಲ.
* ಗಣೇಶ ಮೂರ್ತಿ ತರುವಾಗ ಅಥವಾ ವಿಸಜರ್ಿಸುವಾಗ ಯಾವುದೇ ಮೆರವಣಿಗೆ ಮಾಡುವಂತಿಲ್ಲ. ಅಲ್ಲದೆ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಬರ್ಂಧಿಸಲಾಗಿದೆ.
* ಪಾರಂಪರಿಕವಾಗಿ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಕೊನೆಯಲ್ಲಿ ಮನೆಯಲ್ಲಿಯೇ ವಿಸಜರ್ಿಸವೇಕು. ಅದರಂತೆ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣೇಶ ಮೂರ್ತಿಗಳನ್ನು ನಗರಸಭೆ ಅಥವಾ ಪುರಸಭೆ, ಪಟ್ಟಣ ಪಂಚಾಯತ ಸೇರಿದಂತೆ ಸ್ಥಳೀಯ ಆಡಳಿತ ಮಂಡಳಿ ಹಾಗೂ ವಾಯು ಮಾಲಿನ್ಯ ಆಡಳಿತ ಮಂಡಳಿ ನಿಮರ್ಿಸಿರುವ ಹೊಂಡ ಅಥವಾ ಮೊಬಾಯಿಲ್ ಟ್ಯಾಂಕ್ಗಳಲ್ಲಿ ವಿಸರ್ಜನ ಮಾಡುವಂತೆ ಹೀಗೆ ಹಲವು ಷರತ್ತುಗಳನ್ನು ಹಾಕುವ ಮೂಲಕ ರಾಜ್ಯ ಸರಕಾರ ಕೊನೆ ಗಳಿಗೆಯಲ್ಲಿ ಅನುಮತಿ ನೀಡಿದೆ.
ಪಾಂಡುರಂಗ ಮಹಾದೇವ ಕುಂಬಾರ, ಗಣೇಶ ಮೂರ್ತಿಕಾರ
"ಕೊರೊನಾ ಹಿನ್ನಲೆಯಲ್ಲಿ ಸರಕಾರ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಈ ಹಿಂದೆ ನಿರ್ಬಂಧ ಹಾಕಿತ್ತು. ಇದರಿಂದ ನಮಗೆ ಗಣೇಶ ಮೂರ್ತಿಯ ಪ್ರತಿವರ್ಷಕಿಂತಲೂ ಮೂರ್ತಿಗಳಿಗೆ ಬೇಡಿಕೆ ಕಡಿಯಾಗಿದೆ. ಅಲ್ಲದೆ ಗಣೇಶನ ತಯಾರಿಕೆಗೆ ಮಣ್ಣಿನ ಅಭಾವ ಉಂಟಾಗಿತ್ತು. ಕೊರೊನಾ ಸೋಂಕಿನ ಹಿನ್ನಲೆ ಬಾರಿಯಲ್ಲಿ ಮೂರ್ತಿ ತಯಾರಿಕೆಗೆ ಬಹಳ ತೊಂದರೆ ಉಂಟಾಗಿದೆ. ಕಳೆದ ವರ್ಷದ ಮೂರ್ತಿ ತಯಾರಿಕೆಗೆ ಹೋಲಿಸಿದರೆ ಈ ಬಾರಿ ಶೇ. 50ರಷ್ಟು ಮೂರ್ತಿತಯಾರಿಕೆಯ ಕೆಲಸ ಕಡಿಮೆಯಾಗಿದೆ. ಗಣೇಶ ಮೂರ್ತಿ ತಯಾರಿಕೆಗೆ ಬಳಸುವ ನೀರು ಮಿಶ್ರಿತ (ವಾಟರ್ ಕಲರ್) ಬೆಲೆ ಹೆಚ್ಚಾಗಿದೆ. ಇದರಿಂದ ಎಲ್ಲ ಮೂರ್ತಿಕಾರು ಆಥರ್ಿಕವಾಗಿ ಸಂಕಷ್ಟದಲ್ಲಿ ಇದ್ದೇವೆ. ಸರಕಾರ ಗಣೇಶ ಮೂರ್ತಿ ತಯಾರಿಕರಿಗು ಪರಿಹಾರ ನೀಡವದಾಗಬೇಕು. ಈ ಬಾರಿ ನಾವು ಮಣ್ಣನ್ನು ಗೋಕಾಕ ತಾಲೂಕಿನ ಕೊಣ್ಣುರುನಲ್ಲಿ ಖರೀದಿ ಮಾಡಿ ತರಲಾಗಿದೆ. ಮಣ್ಣು ತರಲು ವಾಹನ ಬಾಡಿಗೆ ದುಬಾರಿ, ವಾಹನದಲ್ಲಿ ಮಣ್ಣು ಹಾಕಲು ಮತ್ತು ಇಳಿಸಲು ಕೂಲಿಕಾರರಿಗೆ ಪಗಾರ ಹೀಗೆ ಸಿಕ್ಕಾಪಟ್ಟೆ ಹಣ ಖಚರ್ಾದರು ಇಲ್ಲಿ ಗಣೇಶ ಮೂರ್ತಿ ಆರ್ಡರ್ ಗಳು ಮಾತ್ರ ಕಡಿಮೆಯಾಗಿವೆ. ಈ ಬಾರಿ ಅಂತು ಮೂರ್ತಿಕಾರಿಗೆ ಮಣ್ಣು ಸಿಕ್ಕಿಲ್ಲ. ಮುಂದಿನ ವರ್ಷ ಆದರು ಸರಕಾರ ಮೂರ್ತಿಕಾರರಿಗೆ ಕಡಿಮೆ ವ್ಯಚ್ವದಲ್ಲಿ ಮಣ್ಣಿ ವ್ಯವಸ್ಥೆ ಮಾಡಿಕೊಡಬೇಕು ಇಲ್ಲವಾದರೆ ಪಿಯೋಪಿ ಬಳಸಲು ಅವಕಾಶವಾದರು ನೀಡಬೇಕು."